Breaking News

ಸದ್ದಾಂ ಹುಸೇನ್‌ರ ಕೊನೆಯ ಆಪ್ತ ಮಿತ್ರರಾಗಿದ್ದ ಆ 12 ಅಮೇರಿಕನ್ ಸೈನಿಕರು

ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರ ಕಾವಲಿಗೆ ಇದ್ದ ಆ ಅಮೇರಿಕಾದ 12 ಸೈನಿಕರು ಜೀವಮಾನಾ ಕಾಲದ ಮಿತ್ರರಲ್ಲದಿದ್ದರೂ, ಅವರ ಅಂತಿಮ ಕಾಲದ ಆಪ್ತ ಮಿತ್ರರು ಎಂದು ಹೇಳಬಹುದು. ಸೂಪರ್ 12 ಎಂದು ಕರೆಯಲ್ಪಡುತ್ತಿದ್ದ ಈ ಸೈನಿಕರು ಸದ್ದಾಂ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಈ ಸೈನಿಕರಲ್ಲಿ ಒಬ್ಬರಾದ ವಿಲ್ ಬಾರ್ಡನ್ ವರ್ಪರ್ ಅವರು ಇದರ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. “ದ ಪ್ರಿಸನರ್ ಇನ್ ಹಿಸ್ ಪ್ಯಾಲೇಸ್, ಹಿಸ್ ಅಮೇರಿಕನ್ ಗಾರ್ಡ್ಸ್, ಆಂಡ್ ವಾಟ್ ಹಿಸ್ಟ್ರಿ ಲೆಪ್ಟ್ ಅನ್ ಸೆಡ್” (ತನ್ನದೇ ಅರಮನೆಯಲ್ಲಿ ಬಂಧಿಯಾಗಿರುವ ಖೈದಿ, ಅವನ ಅಮೇರಿಕನ್ ಕಾವಲಾಳುಗಳು ಮತ್ತು ಹೇಳದೆ ಉಳಿದಿರುವ ಇತಿಹಾಸ).

Image Courtesy : deadpresidents.tumblr.com

ಸದ್ದಾಂ ಹುಸೇನ್ ರನ್ನು 30 ಡಿಸೆಂಬರ್ 2006 ರಂದು 148 ಜನರನ್ನು ಕೊಂಡಾ ಆರೋಪದ ಮೇಲೆ ಗಲ್ಲಿಗೇರಿಸಲಾಗಿತ್ತು. ಸದ್ದಾಂ ರನ್ನು ಗಲ್ಲಿಗೇರಿಸಲು ನೇಣು ಹಾಕುವವರಿಗೆ ಒಪ್ಪಿಸುವ ಮುನ್ನ ಈ 12 ಅಮೇರಿಕನ್ ಸೈನಿಕರು ಅತ್ತಿದ್ದರಂತೆ. ಈ ಬಗ್ಗೆ ವಿಲ್ ಬಾರ್ಡನ್ ವರ್ಪರ್ ಅವರ ಪುಸ್ತಕದಲ್ಲಿ ಉಲ್ಲೇಖವಿದೆ. ಸದ್ದಾಂ ಹುಸೇನ್ ಅವರು ತಮ್ಮ ಗಲ್ಲು ಶಿಕ್ಷೆಯ ಮುನ್ನಾ ದಿನ ಅಮೇರಿಕನ್ ಗಾಯಕಿ ಮೇರಿ ಜೆ. ಬ್ಲೈಜ ಅವರ ಸಂಗೀತವನ್ನು ಕೇಳುತ್ತಿದ್ದರು ಎಂದು ಬಾರ್ಡನ್ ಉಲ್ಲೇಖಿಸಿದ್ದಾರೆ.

ಸದ್ದಾಂ ಹುಸೇನ್ ರನ್ನು ಮಾಧ್ಯಮಗಳು ಹಾಗೂ ಅಮೇರಿಕಾ ಪರ ಇರುವವರು ಒಬ್ಬ ಕ್ರೂರ ವ್ಯಕ್ತಿ ಕೊಲೆಗಾರ ಎಂದೆಲ್ಲ ಹೇಳಿದರೂ ಕೂಡ ಈ ಸೂಪರ್ 12 ಸೈನಿಕರಿಗೆ ಸದ್ದಾಂ ಯಾವತ್ತೂ ಕೆಟ್ಟ ವ್ಯಕ್ತಿಯಾಗಿ ಕಂಡಿಲ್ಲ ಎಂದು ಬಾರ್ಡನ್ ಬರೆದಿದ್ದಾರೆ. ಸದ್ದಾಂ ಹುಸೇನ್ ನಮ್ಮನ್ನು ತಮ್ಮಂದಿರ ಹಾಗೆ ಪರಿಗಣಿಸುತ್ತಿದ್ದರು. ನಾವು ಕಾಯಿಲೆ ಬಿದ್ದಾಗ ವಿಚಲಿತರಾಗುತ್ತಿದ್ದರು ಎಂದು ಸೈನಿಕರು ಹೇಳಿದ್ದಾರೆ.

ಒಂದು ದಿನ ಈ ಸೈನಿಕರಲ್ಲಿ ಒಬ್ಬರಾದ ಆಡಂ ರೋಜರ್ಸನ್ ತನ್ನ ಅಣ್ಣ ತೀರಿ ಹೋದರು ಎಂದು ದುಃಖಿಸುತ್ತಿದ್ದಾಗ ಸದ್ದಾಂ ಹುಸೇನ್ ಆಡಂ ನ ಭುಜ ಹಿಡಿದು ಸಮಾಧಾನಿಸುತ್ತಾ ನಿನಗೆ ಅಭ್ಯಂತರ ವಿಲ್ಲದಿದ್ದರೆ ಇನ್ನು ಮುಂದೆ ನನ್ನನ್ನು ನಿನ್ನ ಅಣ್ಣ ಎಂದು ಕರೆಯಬಹುದು ಎಂದು ಹೇಳಿದ್ದರಂತೆ. ಈ ಸೈನಿಕರಲ್ಲಿ ಒಬ್ಬನಿಗೆ ಸದ್ದಾಂ ಹುಸೇನ್ ತಮ್ಮ ಕೋಟನ್ನು ಉಡುಗೊರೆಯಾಗಿ ನೀಡಿದ್ದರು. ಮತ್ತೊಬ್ಬ ಬಡ ಸೈನಿಕ ಒಂದು ದಿನ ತನ್ನ ಮಗನ ಶಿಕ್ಷಣದ ವೆಚ್ಚೆ ಭರಿಸಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಗ ಸದ್ದಾಂ “ನನ್ನ ಆಸ್ತಿಯನ್ನು ಬಳಸಲು ನನಗೆ ಅನುಮತಿ ದೊರತದ್ದೇ ಆದಲ್ಲಿ ನಿನ್ನ ಮಗನ ಶಿಕ್ಷಣದ ಸಂಪೂರ್ಣ ವೆಚ್ಚ ನನ್ನದು” ಎಂದು ಹೇಳಿದ್ದರಂತೆ.

ಅಮೇರಿಕಾದ ನಂಬರ್ ವನ್ ಶತ್ರುವಾಗಿದ್ದ ಸದ್ದಾಂ ಈ ಸೈನಿಕರಿಗೆ ಇಷ್ಟವಾಗಿದ್ದೇ ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ಆದರೆ ಇದು ನಿಜ. ಸದ್ದಾಂ ಹುಸೇನ್ ರನ್ನು ಗಲ್ಲಿಗೆ ಹಾಕಿ ಅವರ ಶವವನ್ನು ಹೊರಗೆ ಸಾಗಿಸಿದಾಗ ಅಲ್ಲಿದ್ದ ಇರಾಕಿಗಳು ಅವರ ಶವಕ್ಕೆ ಉಗುಳಿದ್ದರು. ಮತ್ತು ಸದ್ದಾಂ ವಿರೋಧಿ ಘೋಷಣೆ ಕೂಗಿದ್ದರು. ಇದನ್ನು ಕಂಡು ವಿಚಲಿತನಾಗಿದ್ದ ಅಮೇರಿಕನ್ ಸೈನಿಕ ಸೂಪರ್ 12 ಸದಸ್ಯ ಸ್ಟೀವ್ ಹಚಿಂಗ್ಸನ್ ಅಲ್ಲಿದ್ದ ಇರಾಕಿಗಳಿಗೆ ಪ್ರತಿರೋಧ ತೋರಿಸಿದ್ದರಂತೆ. ಆದರೆ ಅವರನ್ನು ತಡೆಯಲಾಯಿತಂತೆ. ಇದೇ ಸ್ಟೀವ್ ಹಚಿಂಗ್ಸನ್ ಸದ್ದಾಂ ಅವರ ಮರಣದ ಬಳಿಕ ಅಮೇರಿಕನ್ ಸೇನೆಗೆ ಸ್ವಯಂ ನಿವೃತ್ತಿ ನಿವೃತ್ತಿ ಘೋಷಿಸಿದ್ದರು. ತುಂಬಾ ಸಮಯದ ಬಳಿಕ ಪತ್ರಕರ್ತನೊಬ್ಬ ಈ ಬಗ್ಗೆ ಸ್ಟೀವ್ ರನ್ನು ಪ್ರಶ್ನಿಸಿದಾಗ ನನಗೆ ಸದ್ದಾಂ ಹತ್ಯೆ ಮಾಡಿದ ಪಾಪ ಕಾಡುತ್ತಿತ್ತು. ಆದ್ದರಿಂದ ನನಗೆ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಉತ್ತರಿಸಿದ್ದರು.

ಸದ್ದಾಂನ ಬಗ್ಗೆ ಅಪಾರ ಗೌರವ ಹೊಂದಿದ್ದ ಈ ಸೈನಿಕರು ಜೈಲಿನಲ್ಲಿ ಅವರ ಕೋಣೆಯನ್ನು ಆಫೀಸಿನ ರೀತಿ ಅಲಂಕರಿಸಿದ್ದರು. ಅಲ್ಲಿ ಒಂದು ಕಾರ್ಪೆಟ್ ಹಾಸಿದ ಮೇಜು ಅದರ ಹಿಂದೆ ಒಂದು ಐಷಾರಾಮಿ ಕುರ್ಚಿ ಹಾಗೂ ಅದರ ಮುಂಭಾಗದಲ್ಲಿ ನಾಲ್ಕು ಸಾದಾ ಕುರ್ಚಿಗಳನ್ನು ಇಡಲಾಗಿತ್ತು. ಅಲ್ಲಿ ಸೈನಿಕರು ಕೂರುತ್ತಿದ್ದರು. ನಾವು ಅವರನ್ನು ಅವಮಾನಿಸಲು ಬಯಸುತ್ತಿರಲಿಲ್ಲ. ಆ ಕಾರಣದಿಂದಾಗಿ ಅವರ ಘನತೆಗೆ ಧಕ್ಕೆ ಬರದ ರೀತಿಯಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೆವು ಎಂದು ಸೈನಿಕರು ಹೇಳಿದ್ದಾರೆ.

ಸದ್ದಾಂ ಗೆ ತನ್ನ ಜೀವನದ ಕೊನೆಯವರೆಗೂ ಬದುಕಿನ ಮೇಲೆ ಆಸೆ ಮುರಿದಿರಲಿಲ್ಲ. ತಮ್ಮ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗ ನಾನು ಆರೋಪ ಮುಕ್ತನಾಗಿ ಜೈಲಿನಿಂದ ಹೊರ ಬಂದು ಮದುವೆಯಾಗಬಯಸಿರುವುದಾಗಿ ಅವರು ಸೈನಿಕರಲ್ಲಿ ಹೇಳಿದ್ದರಂತೆ. ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದು ನನಗೆ ಶಿಕ್ಷೆಯಾಗಲಾರದು ಎಂದು ಅವರು ಬಲವಾದ ವಿಶ್ವಾಸವನ್ನು ಹೊಂದಿದ್ದರಂತೆ.

ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿದಾಗ ಸೋತವರಂತೆ ಕಂಡು ಬರುತ್ತಿದ್ದ ಸದ್ದಾಂ ಆಗಲೂ ಈ ‘ಸೂಪರ್ 12’ ಗಳ ಆರೋಗ್ಯವನ್ನು ದಿನಂಪ್ರತಿ ವಿಚಾರಿಸುವುದು ಮರೆಯುತ್ತಿರಲಿಲ್ಲವಂತೆ. ಅವರು ಗಲ್ಲಿಗೇರುವ ದಿನದ ಹಿಂದಿನ ಆ ರಾತ್ರಿ ಸೂಪರ್ 12 ಗಳಲ್ಲಿ ಯಾರೂ ಕೂಡ ನಿದ್ದೆ ಮಾಡಿರಲಿಲ್ಲವಂತೆ. ಬೆಳಗಿನ ಜಾವದ ವರೆಗೆ ಆಗಾಗ ಬಂದು ಸದ್ದಾಂರನ್ನು ನಾವೆಲ್ಲ ನೋಡುತ್ತಿದ್ದೆವು ಎಂದು ವಿಲ್ ಬಾರ್ಡನ್ ಬರೆದಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಎದ್ದ ಸದ್ದಾಂ ಸ್ವಯಂ ಸ್ನಾನ ಮಾಡಿ ಗಲ್ಲಿಗೇರುವ ಮುನ್ನ ಎಲ್ಲಾ 12 ಸೈನಿಕರನ್ನು ಭೇಟಿಯಾಗಿ ಅವರಲ್ಲಿ ಸ್ಟೀವ್ ಹಚಿಂಗ್ಸನ್ ಅವರಿಗೆ ತನ್ನ ಕೈಯಲ್ಲಿದ್ದ ಬೆಳೆಬಾಳುವ ‘ರೇಮಂಡ್ ವೇಲ್’ ವಾಚನ್ನು ನೀಡಿದ್ದರು. ಈ ವಾಚ್ ಈಗಲೂ ಹಚಿಂಗ್ಸನ್ ಬಳಿ ಸುರಕ್ಷಿತವಾಗಿದೆ ಎಂದು ವಿಲ್ ಬಾರ್ಡನ್ ಉಲ್ಲೇಖಿಸಿದ್ದಾರೆ.

Leave a Reply