Breaking News

ಒಂದೂವರೆ ವರ್ಷದಿಂದ ತನಗೆ ಬಿದ್ದು ಸಿಕ್ಕ ಹಣದ ನೈಜ ಅವಕಾಶಿಗಳಿಗಾಗಿ ಹುಡುಕಾಡುತ್ತಿರುವ ಸಾಹುಲ್ ಹಮೀದ್

ಸಂದೇಶ ಮ್ಯಾಗಝಿನ್: ಇತ್ತಿಚಿನ ದಿನಗಳಲ್ಲಿ ಆಪ್ತ ಸ್ನೇಹಿತರೇ ಹಣ ಪಡೆದು ವಂಚಿಸುತ್ತಿರುವ ಕಾಲದಲ್ಲಿ ಯಾರದೋ ಅರಿವಿಲ್ಲದೆ ಬಿದ್ದು ಸಿಕ್ಕಿರುವ ಒಂದು ಸಣ್ಣ ಪರ್ಸ್ (ಬ್ಯಾಗ್)ಅನ್ನು ಕಂಡು ತೆಗೆದು ಅದರಲ್ಲಿ ಇರುವ ಸುಮಾರು 740 ರೂಪಾಯಿ ಹಣವನ್ನು ಕಂಡು ಅದೆ ಪರ್ಸ್ ಅನ್ನು ಬಿದ್ದು ಸಿಕ್ಕಿರುವ ಊರಿಗೆ ಹೋಗಿ ಅಲ್ಲಿಯ ಪೋಸ್ಟ್ ಆಫೀಸ್ ನಲ್ಲಿ ಅದರಲ್ಲಿ ಇದ್ದ ಚೀಟಿನ ಗುರುತು ಕೇಳಿ ಈ ಹೆಸರಿನವರನ್ನು ತಮಗೆ ಪರಿಚಯವಿದೆಯೆ ಎಂದು ಕೇಳಿ ಅವರ ನಿರಾಸದಾಯಕ ಪ್ರತಿಕ್ರಿಯೆ ಕಂಡು ತಿರುಗಿ ಬಂದ ಸಾಹುಲ್ ಯಾನೆ ಸಾಹುಲ್ ಹಮಿದ್ ನಿಜಕ್ಕೂ ಅವರ ಮಾಡಿರುವ ಕೆಲಸ ಮೆಚ್ಚಬೇಕಾಗಿರುವುದೇ.

ವಿದೇಶದಿಂದ ಬಂದ ಸಾಹುಲ್ ಯಾನೆ ಸಾಹುಲ್ ಹಮಿದ್ ತನ್ನ ವಿವಾಹಕ್ಕೆ ಆಮಂತ್ರಿಸಲು‌ ಅಕ್ಕನ ಮನೆ ಪಾವೂರ್ ತೆರಳುವಾಗ ಸಿಕ್ಕಿ ಬಿದ್ದ ಪರ್ಸ್ ನ್ನು ತೆಗೆದು ಇದರ ವಾರಿಸುದಾರರ ಪತ್ತೆ ಹಚ್ಚಲು ಬಹಳಷ್ಟು ಶ್ರಮಪಡುತ್ತಾರೆ. ಅವರ ಪಟ್ಟ ಶ್ರಮಕ್ಕೆ ಪರ್ಸ್ ಕಳೆದು ಕೊಂಡ ಜನರಿಗೆ ತಲುಪದೆ ಇದ್ದಾಗ ಬೇಸತ್ತು, ಇನ್ನೇನು ತಾನು ವಿದೇಶಕ್ಕೆ ಹೊರಡಲು ಸಮಯ ಆಗುತ್ತಾ ಬಂದಿರುವುದರಿಂದ ತನ್ನ ಆಪ್ತ ಸ್ನೇಹಿತನಲ್ಲಿ ಆ ಪರ್ಸ್ ಕೊಟ್ಟು ತನಗೆ ಸಿಕ್ಕಿದ್ದ ಹಾಗೂ ನಡೆದ ವಿಷಯವನ್ನು ವಿವರಿಸಿ ಅವರಲ್ಲಿ ಕೊಟ್ಟು ಬಿಟ್ಟು ತಾನು ವಿದೇಶಕ್ಕೆ ತೆರಳಿದ್ದಾರೆ.

ಸುಮಾರು ಒಂದು ವರೆ ವರ್ಷಗಳ ಕಾಲ ವಿದೇಶದಲ್ಲಿ ಇದ್ದ ಸಾಹುಲ್ ಇದೀಗ ೨ ತಿಂಗಳ ಮುಂಚೆ ಸ್ವದೇಶಕ್ಕೆ ಆಗಮಿಸಿದ ವಿಷಯ ತಿಳಿದ ಆಪ್ತ ಸ್ನೇಹಿತ ಆ ಪರ್ಸ್ ತಿರುಗಿ ಸಾಹುಲ್ ಹಮೀದ್ ಅವರಿಗೆ ನೀಡಿ ಇದರ ವಾರಿಸುದಾರ ಇದುವರೆಗೂ ಬಂದಿಲ್ಲ ಅಂತ ಮರಳಿಸಿದರು. ಈ ಪರ್ಸನ್ನು ಕಳೆದು ಕೊಂಡ ವ್ಯಕ್ತಿ ಮರೆತಿರಬಹುದು ಆದರೆ ಅದು ಬಿದ್ದು ಸಿಕ್ಕ ಸಾಹುಲ್ ಇನ್ನೂ ಕೂಡ ಇದರ ವಾರಿಸುದಾರರಿಗೆ ತಲುಪಿಸಲು ಶ್ರಮಪಡುತ್ತಿದ್ದಾರೆ. ಈ ಪೋಟೊದಲ್ಲಿ ಕಾಣುವ ಪರ್ಸ್ ನ ಕಳೆದುಕೊಂಡ ನಿಜವಾದ ವ್ಯಕ್ತಿ ಎಲ್ಲಿಯಾದರೂ ಇದ್ದರೆ, ಈ ಬರಹ ಹಾಗೂ ಪೋಟೊವನ್ನು ಕಂಡು ತಮ್ಮದೆಂದು ಅರಿವಾದರೆ ಸಾಹುಲ್ ಹಮೀದ್ ಅವರಿಗೆ ಕರೆಮಾಡಿ ವಿಚಾರಿಸಿ ನೈಜ ವಾರಿಸುದಾರರು ಪಡೆದು ಕೊಳ್ಳಿ ಎಂದು ವಿನಂತಿಸಿದ್ದಾರೆ. ಸಾಹುಲ್ ಹಮೀದ್ ಅವರ ಮೊಬೈಲ್ ಸಂಖ್ಯೆ 7338349107 .

-ಮುಹಮ್ಮದ್ ಇರ್ಷಾದ್ ಅಕ್ಕರಂಗಡಿ.

Leave a Reply