Breaking News
Image : Twitter

ಇಸ್ರೋದ ಕಿರಿಯ ವಿಜ್ಞಾನಿಯಾಗಿ ಆಯ್ಕೆಯಾದ ನಜ್ನೀನ್ ಜಾಸ್ಮೀನ್

ಇತ್ತೀಚೆಗೆ ನಜ್ನೀನ್ ಜಾಸ್ಮೀನ್ ಎಂಬ ಯುವತಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ತನ್ನ ಕಿರಿಯ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ. ತನ್ನ ಕನಸುಗಳ ಬೆನ್ನು ಹತ್ತಿದರೆ ಮನುಷ್ಯ ಒಂದಲ್ಲ ಒಂದು ದಿನ ಅದನ್ನು ಹಿಡಿದೇ ಹಿಡಿಯುತ್ತಾನೆ ಎಂಬುವುದಕ್ಕೆ ಅಸ್ಸಾಂ ಮೂಲದ ನಜ್ನೀನ್ ಜಾಸ್ಮೀನ್ ಉತ್ತಮ ಉದಾಹರಣೆ.

ಸಣ್ಣ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ನಜ್ನೀನ್ ಜಾಸ್ಮೀನ್ ಅವರಿಗೆ ಸಣ್ಣ ಪ್ರಾಯದಲ್ಲೇ ರಾಕೆಟ್ ಗಳನ್ನು ಹೇಗೆ ಹಾರಿಸುತ್ತಾರೆ ಎಂಬ ಬಗ್ಗೆ ತೀವ್ರ ಕುತೂಹಲವಿತ್ತಂತೆ. ನಜ್ನೀನ್ ಜಾಸ್ಮೀನ್ ಅವರ ಬಾಲ್ಯದಲ್ಲಿ ಭಾರತದ ಹೆಮ್ಮೆ ಕಲ್ಪನಾ ಚಾವ್ಲಾ ಅವರು ಬಾಹ್ಯಾಕಾಶಕ್ಕೆ ತೆರಲಿ ಆ ನಂತರ ಕೊಲಂಬಿಯಾ ಹ್ಯೂಮ ನೌಕೆ ದುರಂತದಲ್ಲಿ ಮಡಿದ ಬಗ್ಗೆ ತಿಳಿದು ಕಲ್ಪನಾ ಚಾವ್ಲಾರ ಹಾಗೆ ನಾನೂ ಕೂಡ ಬಾಹ್ಯಾಕಾಶಕ್ಕಾಗಿ ಕೆಲಸ ಮಾಡಬೇಕು ಎಂಬ ತೀವ್ರ ತುಡಿತವನ್ನು ಹೊಂದಿದ್ದರು.

ಅಸ್ಸಾಮಿನ ನಾಗಾಂವ್ ಜಿಲ್ಲೆಯ ಜುರಿಯಾ ನಿವಾಸಿಯಾಗಿರುವ ನಜ್ನೀನ್ ಜಾಸ್ಮೀನ್ ತೇಜ್ ಪುರ್ ವಿಶ್ವ ವಿದ್ಯಾನಿಲಯದಲ್ಲಿ ಎಂ.ಟೆಕ್ ಪದವಿ ಪಡೆದು ಇದೀಗ ತಮ್ಮ ಕನಸಿನ ಕೆಲಸವನ್ನು ಪಡೆದು ಯಶಸ್ವಿಯಾಗಿದ್ದಾರೆ. ಇಸ್ರೋ ದಲ್ಲಿ ಕೆಲಸ ಪಡೆಯುವಲ್ಲಿ ನಜ್ನೀನ್ ಜಾಸ್ಮೀನ್ ಅವರಿಗೆ ಅವರ ಒಬ್ಬ ಗೆಳೆಯ ಹಾಗೂ ಇಂಟರ್ನೆಟ್ ಸಹಾಯ ಮಾಡಿದೆಯಂತೆ.

ಎಂ.ಟೆಕ್ ಪದವಿ ಮುಗಿದ ಬಳಿಕ ನಜ್ನೀನ್ ಜಾಸ್ಮೀನ್ ತನ್ನ ಒಬ್ಬ ವಿಜ್ಞಾನಿ ಮಿತ್ರನ ಸಹಾಯ ಪಡೆದು ಅದರ ಬಗ್ಗೆ ಅಧ್ಯಯನ ಪ್ರಾರಂಭಿಸಿದರು. ಮತ್ತು ಈ ಸಂದರ್ಭದಲ್ಲಿ ಇಂಟರ್ನೆಟ್ ನಲ್ಲಿ ಹಲವಾರು ಮಾಹಿತಿಯನ್ನು ಅವರು ಪಡೆದಿದ್ದಾರಂತೆ. 2019 ರಲ್ಲಿ ಇಸ್ರೋದಲ್ಲಿ ಆಯ್ಕೆಗಾಗಿ ಯಾಸ್ಮಿನ್ ಲಿಖಿತ ಪರೀಕ್ಷೆಯನ್ನು ಬರೆದರು. ಇದರ ನಂತರ, ಅವರನ್ನು ಆಗಸ್ಟ್ 11, 2021 ರಂದು ಶಿಲ್ಲಾಂಗ್‌ನಲ್ಲಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದಲ್ಲಿ ಅವರನ್ನು ಸಂದರ್ಶನಕ್ಕೆ ಕರೆಯಲಾಯಿತು. ನಜ್ನೀನ್ ಜಾಸ್ಮೀನ್ ಅವರ ಸಾಧನೆಯ ಬಗ್ಗೆ ಅವರ ತಂದೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply