Breaking News
Source : Youtube Screen grab

ನೆರೆ ಪೀಡಿತ ಮಸೀದಿಗೆ ಈಜಿ ಕೊಂಡು ಹೋಗಿ ನಮಾಝ್ ನಿರ್ವಹಿಸುತ್ತಿರುವ ಇಮಾಮ್

ಇತ್ತೀಚೆಗೆ ಬಾಂಗ್ಲಾದೇಶದ ಸತ್ಕೀರ ಎಂಬಲ್ಲಿ ಚಂಡಮಾರುತದಿಂದಾಗಿ ವಿಪರೀತ ಮಳೆಯಾಗಿದ್ದು, ಆ ಪ್ರದೇಶ ಸಂಪೂರ್ಣ ಮುಳುಗಡೆಯಾಗಿತ್ತು. ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ಬಡವರಾಗಿದ್ದು, ಹಲವರು ತಮ್ಮ ಮನೆ ಜೀವನಾವಶ್ಯಗಳನ್ನು ಕಳೆದ್ದುಕೊಂಡಿದ್ದಾರೆ. ಹೆಚ್ಚಾಗಿ ಮುಸ್ಲಿಮರೆ ವಾಸಿಸುತ್ತಿರುವ ಈ ಪ್ರದೇಶವು ಹಲವಾರು ಮಸೀದಿಗಳನ್ನು ಹೊಂದಿದೆ.

ಇತ್ತೀಚೆಗೆ ವೈರಲ್ ಆಗಿರುವ ವೀಡಿಯೋ ಒಂದರ ಪ್ರಕಾರ ಇಲ್ಲಿನ ಮಸೀದಿಯೊಂದರ ಇಮಾಮ್ ಒಬ್ಬರು ಮುಳುಗಡೆಯಾಗಿರುವ ಮಸೀದಿಗೆ ಈಜಿಕೊಂಡು ಹೋಗಿ ಮಸೀದಿಯಲ್ಲಿ ಆಝಾನ್ ಹಾಗೂ ನಮಾಝ್ ಸ್ಥಗಿತ ಗೊಳ್ಳದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಬೋಟ್ ವ್ಯವಸ್ಥೆ ಇದ್ದು ಆಗ ಬೋಟಿನಲ್ಲಿ ಹೋಗುತ್ತೇನೆ. ಆದರೆ ಕೆಲವೊಮ್ಮೆ ಬೋಟ್ ಇಲ್ಲದ ಕಾರಣ ಈಜಿಕೊಂಡು ಹೋಗಬೇಕಾಗುತ್ತೆ ಎಂದು ಅವರು ಹೇಳುತ್ತಾರೆ.

Source : Youtube Screen Grab

ನೀವ್ಯಾಕೆ ಈಜಿಕೊಂಡು ಹೋಗಿ ನಮಾಝ್ ಮಾಡುವುದು ನಿಮಗೆ ಈ ಸಮಯದಲ್ಲಿ ಮನೆಯಲ್ಲೇ ನಮಾಝ್ ನಿರ್ವಹಿಸಬಹುದಲ್ಲ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಯುವ ಇಮಾಮ್, ಮಸೀದಿಯನ್ನು ಅನಾಥವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಆದುದರಿಂದ ಮಸೀದಿಯಲ್ಲಿ ಅಲ್ಲಾಹನ ಆರಾಧನೆ ನಿರಂತರವಾಗಿ ನೆಲೆನಿಲ್ಲಬೇಕು ಎಂದು ಇಷ್ಟು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಬೋಟ್ ಇದ್ದರೆ ನನ್ನ ಜೊತೆ ನಾಲ್ವರು ಅಥವಾ ಐವರು ಸಹ ನಮಾಝಿಗಳು ಇರುತ್ತಾರೆ. ಆದರೆ ಹೆಚ್ಚಿನ ಸಮಯದಲ್ಲಿ ಬೋಟ್ ಇರದ ಕಾರಣ ಐದರಲ್ಲಿ ನಾಲ್ಕು ನಮಾಝ್ ಗಳನ್ನು ಹೆಚ್ಚಾಗಿ ನಾನೊಬ್ಬನೇ ನಿರ್ವಹಿಸುತ್ತೇನೆ. ಮತ್ತು ಸುಬಹ್ ಅಥವಾ ಬೆಳಗಿನ ನಮಾಝ್ ಗೆ ಸುಲಭವಾಗಲಿ ಎಂದು ರಾತ್ರಿ ಆಹಾರದ ಪೊಟ್ಟಣದೊಂದಿಗೆ ಮಸೀದಿಗೆ ತಲುಪಿ ಮಸೀದಿಯ ಮಹಡಿಯ ಮೇಲೆ ಮಲಗುತ್ತೇನೆ. ಆದರೆ ಮಳೆ ಇದ್ದರೆ ನನ್ನ ನಿದ್ರೆಗೆ ಅಡಚಣೆಯಾಗುತ್ತಿದ್ದು, ಆಗ ರಾತ್ರಿ ಇಡೀ ಜಾಗರ‌ಣೆ ಮಾಡಬೇಕಾಗುತ್ತೆ ಎಂದು ಅವರು ವಿವರಿಸುತ್ತಾರೆ.

Leave a Reply