Breaking News
khabib nurmagomedov

ನಿಮ್ಮ ಹೆತ್ತವರೊಂದಿಗೆ ನಿಕಟವಾಗಿರಿ ಮುಂದೆ ಏನಾಗಲಿದೆ ಎಂದು ಯಾರಿಗೂ ಗೊತ್ತಿಲ್ಲ: ಖಬೀಬ್ ನೂರ್ಮಾಗೊಮೆಡೋವ್

ಸಂದೇಶ ಮ್ಯಾಗಝಿನ್ : ರಷ್ಯನ್ ಮಾರ್ಷಿಯಲ್ ಆರ್ಟಿಸ್ಟ್ ಖಬೀಬ್ ನೂರ್ಮಾಗೊಮೆಡೋವ್ ಫೈನಲ್ ವಿಜಯದ ನಂತರ ಇಂದು ತಮ್ಮ ವೃತ್ತಿ ಜೀವನದ ನಿವೃತ್ತಿ ಘೋಷಿಸಿದ್ದಾರೆ. ಅವರ ಅನಿರೀಕ್ಷಿತ ನಿವೃತ್ತಿಯಿಂದಾಗಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ನಿನ್ನೆ ಅಬೂಧಾಬಿಯಲ್ಲಿ ನಡೆದ UFC 254 ಫೈನಲ್ ನಲ್ಲಿ ಜಸ್ಟಿನ್ ಗ್ಯಾತ್ಜೆ ಜೊತೆ ಸೆಣಸಾಡಿದ ಖಬೀಬ್ ವಿಜಯದ ನಂತರ ಇತ್ತೀಚಿಗೆ ಕೋವಿಡ್ ನಿಂದಾಗಿ ನಿಧನರಾದ ತಮ್ಮ ತಂದೆ ಹಾಗೂ ಕೋಚ್ ಕೂಡ ಆಗಿದ್ದ ಅಬ್ದುಲ್ ಮನಾಫ್ ಅವರ ಬಗ್ಗೆ ಭಾವುಕರಾದರು.

ಭಾವುಕ ವಿದಾಯ

ಗೆಲುವಿನ ನಂತರ ತಮ್ಮ ನಿವೃತ್ತಿಯನ್ನು ಘೋಷಿಸುವ ಮೊದಲು 32 ವರ್ಷದ ಖಬೀಬ್ ಭಾವುಕರಾಗಿ ಕಣ್ಣೀರು ತಡೆಯಲಾರದೆ ಕುಸಿದರು. ಈ ಸಂದರ್ಭದಲ್ಲಿ ತಮ್ಮ ಎದುರಾಳಿ ಜಸ್ಟಿನ್ ಗ್ಯಾತ್ಜೆ ಅವರೊಂದಿಗೆ ಮಾತನಾಡುತ್ತಾ ಅಮೇರಿಕನ್ನರಿಗೆ ತಮ್ಮ ಹೆತ್ತವರನ್ನು ಅನುಸರಿಸುವಂತೆ ಸಲಹೆ ನೀಡಿದರು.

UFC 254: Emotional Khabib Nurmagomedov retires on top
Image: Yahoo Sports

ತಂದೆಯ ಮರಣದ ನಂತರ ಮೊದಲ ಟೂರ್ನಿ

ಅಬೂಧಾಬಿಯಲ್ಲಿ ನಡೆದ UFC 254 ಖಬೀಬ್ ಗೆ ತಮ್ಮ ತಂದೆಯ ಮರಣದ ನಂತರದ ಮೊದಲ ಪಂದ್ಯವಾಗಿತ್ತು. ತಂದೆಯ ಮರಣದ ನಂತರ ತೀವ್ರ ಭಾವುಕರಾಗಿದ್ದ ಖಬೀಬ್, ಹಲವು ವೇದಿಕೆಗಳಲ್ಲಿ ತಮ್ಮ ತಂದೆಯನ್ನು ನೆದು ಕಣ್ಣೀರಾಗಿದ್ದರು. ಕಳೆದ ಜುಲೈನಲ್ಲಿ ಖಬೀಬ್ ಅವರ ತಂದೆ ಹಾಗೂ ಕೋಚ್ ಆಗಿದ್ದ ಅಬ್ದುಲ್ ಮನಾಫ್ ನೂರ್ಮಾಗೊಮೆಡೋವ್ ಅವರು ಕೋವಿಡ್ -19 ಸೋಂಕಿನಿಂದ ನಿಧನರಾಗಿದ್ದರು. ಖಬೀಬ್ ಅವರ ವೃತ್ತಿ ಜೀವನದ ಯಶಸ್ಸಿನ ಹಿಂದೆ ಅಬ್ದುಲ್ ಮನಾಫ್ ಅವರ ಅಪಾರ ಶ್ರಮವಿತ್ತು ಎನ್ನಲಾಗಿದೆ.

2018 ರಲ್ಲಿ UFC ಚಾಂಪಿಯನ್ ಆಗಿದ್ದ ಖಬೀಬ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಸೋಲಿಲ್ಲದ ಸರದಾರರಾಗಿ ಮಿಂಚುತ್ತಿದ್ದ ಖಬೀಬ್, ಎಲ್ಲಕ್ಕಿಂತ ಮುಖ್ಯವಾಗಿ ಅವರ ವ್ಯಕ್ತಿತ್ವ ಹಾಗೂ ಧರ್ಮ ನಿಷ್ಠೆಯ ಮಾತುಗಳು ಅವರ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದವು.

ಗೆಲುವಿನ ನಂತರ ಎದುರಾಳಿಯನ್ನು ಪ್ರಶಂಸಿದ ಖಬೀಬ್

ಸಹೋದರ ಜಸ್ಟಿನ್ ಗ್ಯಾತ್ಜೆ ನಿಮಗೆ ತುಂಬಾ ಧನ್ಯವಾದಗಳು. 2016 ರಲ್ಲಿ ನಾನು ತೂಕವನ್ನು ಕಡಿತಗೊಳಿಸಿದಾಗ, ನೀವು ನನಗೆ ತುಂಬಾ ಸಹಾಯ ಮಾಡಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ನಿಮ್ಮ ಆಪ್ತ ಜನರನ್ನು ಹೇಗೆ ನೋಡಿಕೊಳ್ಳುತ್ತೀರಿ ಅಂತ ಗೊತ್ತಿದೆ. ನೀವೊಬ್ಬ ಮಹಾನ್ ಆಟಗಾರ. ನಿಮ್ಮ ಬಗೆ ಬಹಳಷ್ಟು ಹೇಳಲಿಕ್ಕಿದೆ. ಯಾವುದೇ ಕಾರಣಕ್ಕೂ ನಿಮ್ಮ ಹೆತ್ತವರನ್ನು ನೋಯಿಸಬೇಡಿ. ಹೆತ್ತವರಿಗೆ ಆಪ್ತರಾಗಿರಿ. ನಾಳೆ ಏನಾಗಲಿದೆ ಎಂದು ಯಾರಿಗೂ ಗೊತ್ತಿಲ್ಲ. ಒಂದು ದಿನ ಅದು ಸಂಭವಿಸಿಯೇ ತೀರುತ್ತೆ ಎಂದು ತಮ್ಮ ತಂದೆ ಅಬ್ದುಲ್ ಮನಾಫ್ ರನ್ನು ನೆನೆದು ಕಣ್ಣೀರಾದರು.

Leave a Reply