Breaking News

ಮಗಳ ವರದಕ್ಷಿಣೆಗಾಗಿ ಎತ್ತಿಟ್ಟಿದ್ದ ಹಣದಲ್ಲಿ 5 ಬಡ ಯುವತಿಯರ ಮದುವೆ ನೆರವೇರಿಸಿದ ಸಲೀಮ್

Image Source : Mathrubhumi

ಕೇರ‍ಳದ ಕಣ್ಣೂರು ಜಿಲ್ಲೆಯ ಎಡಚ್ಚೇರಿ ಮೂಲದ ಅನಿವಾಸಿ ಭಾರತೀಯ ಸಲೀಮ್ ಹಾಗೂ ರುಬೀನಾ ದಂಪತಿಗಳು ತಮ್ಮ ಮಗಳ ಮದುವೆಯ ಜೊತೆಗೆ ಇತರ ಐದು ಬಡ ಹೆಣ್ಣು ಮಕ್ಕಳ ವಿವಾಹ ನೆರವೇರಿಸಿ ಸಮಾಜದಲ್ಲಿ ಆದರ್ಶ ಮೆರೆದಿದ್ದಾರೆ. ಸಲೀಮ್ ಅವರ ಮಗಳು ರಮೀಸಾಳ ಮದುವೆಯ ಜೊತೆಗೆ ನಡೆದ ಈ ಐದು ಮದುವೆಗಳಲ್ಲಿ ಮೂವರು ಹಿಂದೂ ಹಾಗೂ ಇಬ್ಬರು ಮುಸ್ಲಿಮ್ ದಂಪತಿಗಳು ಸತಿಪತಿಗಳಾದರು.

ಮುಸ್ಲಿಮ್ ಸಂಪ್ರದಾಯದಂತೆ ನಡೆದ ಮದುವೆಗಳಿಗೆ ಮುನವ್ವರ್ ಅಲಿ ಶಿಹಾಬ್ ತಂಘಳ್ ನೇತೃತ್ವ ನೀಡಿದರು. ಪ್ರತಿ ವಧುಗಳಿಗೆ ಸಲೀಮ್ ಅವರು ೧೦ ಪವನ್ ಚಿನ್ನ ಉಡುಗೊರೆಯಾಗಿ ನೀಡಿದರು. ಈ ಮದುವೆಯ ಇನ್ನೊಂದು ವಿಶೇಷತೆಯೇನೆಂದರೆ ಮುಸ್ಲಿಮ್ ವಧು ವರರ ಮದುವೆ ಮುಸ್ಲಿಮ್ ಸಂಪ್ರದಾಯದಂತೆ ನಡೆದರೆ ಹಿಂದೂ ವಧು ವರರ ಮದುವೆ ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಯಿತು.

ಎಲ್ಲಾ ವಧುಗಳು ಸಲೀಮ್ ಅವರ ಮಗಳು ರಮೀಸ ಧರಿಸಿದ ಅದೇ ಬಣ್ಣದ ಅದೇ ಬೆಲೆಯ ಸೀರೆಯನ್ನು ಉಟ್ಟು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಲೀಮ್ ಅವರ ನೈತಿಕ ಶ್ರೀಮಂತಿಕೆಯನ್ನು ಸಭಿಕರ ಮುಂದೆ ಎತ್ತಿ ಹಿಡಿಯಿತು.

ಸಲೀಮ್ ಅವರಿಗೆ ತಮ್ಮ ಮಗಳು ರಮೀಸಾಳಿಗೆ ವರದಕ್ಷಿಣೆ ಇಲ್ಲದೆ ಮದುವೆ ಮಾಡುವ ಬಯಕೆ ಇತ್ತು. ಸಲೀಮ್ ಅವರ ಆಸೆಯಂತೆ ರಮೀಸಾಳಿಗೆ ವರದಕ್ಷಿಣೆ ಪಡೆಯದ ವರನ ಕಡೆಯಿಂದ ಉತ್ತಮ ಸಂಬಂಧ ದೊರೆತಿದ್ದು. ಇದರಿಂದಾಗಿ ಸಲೀಮ್ ತಮ್ಮ ಮಗಳ ಮದುವೆಗೆಂದು ಎತ್ತಿಟ್ಟಿದ್ದ ಹಣದಲ್ಲಿ ಬಡ ಹೆಣ್ಣು ಮಕ್ಕಳ ಮದುವೆ ಮಾಡಿಸಲು ತೀರ್ಮಾನಿಸಿದರು. ಇದರಂತೆ ಸ್ವತಃ ಸಲೀಮ್ ಅವರೇ ಬಡ ಕುಟುಂಬಗಳನ್ನು ಸಂದರ್ಶಿಸಿ ಅರ್ಹ ಕುಟುಂಬಗಳನ್ನು ಆಯ್ಕೆ ಮಾಡಿದ್ದಾರೆ. ವಯನಾಡ್, ಎಡಚೇರಿ, ಗುಡುಲುರ‍್, ಮಲಪ್ಪುರಂ, ಮೇಪ್ಪಾಯೂರ್ ಮೂಲದ ಐವರು ಬಡ ಯುವತಿಯರನ್ನು ಆಯ್ಕೆ ಮಾಡಿದ್ದರು.

Leave a Reply