Breaking News

Freedom Of speach ಅಂದ್ರೆ ಜನರನ್ನು ಅವಮಾನಿಸಲು ಇರುವ ಸ್ವಾತಂತ್ರ್ಯವೇ?

ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ದುರುಪಯೋಗವಾಗುತ್ತಿರುವ ಒಂದು ಸ್ವಾತಂತ್ರ್ಯವಾಗಿದೆ ಈ Freedom Of speach ಎಂಬುದು, ವಾಕ್ ಸ್ವಾತಂತ್ರ್ಯ ಇದೆ ಎಂದು ನಾವು ಯಾರನ್ನೂ ಬೇಕಾದರೂ ಅವಮಾನಿಸಬಹುದು ಎಂದು ಅದರ ಅರ್ಥವೇ..? ಮೊನ್ನೆ ಫ್ರಾನ್ಸ್ ನಲ್ಲಿ ಶಿಕ್ಷಕನೊಬ್ಬ ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ) ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿ ಮುಸ್ಲಿಮ್ ಧರ್ಮ ವಿಶ್ವಾಸಿಗಳ ಭಾವನೆಗೆ ಇದೇ Freedom Of speach ಹೆಸರಿನಲ್ಲಿ ಅವಮಾನಿಸಿದ್ದಾನೆ. ಇದರಿಂದ ಉದ್ರಿಕ್ತನಾದ ಚೆಚೆನ್ ಮೂಲದ ಯುವಕನೊಬ್ಬ ಆ ಶಿಕ್ಷಕನ ಶಿರಛ್ಚೇಧ ಮಾಡಿ ಕೊಂದಿದ್ದಾನೆ. ಕೊಲೆಯನ್ನು ನಾವ್ಯಾರೂ ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಬೇಕಾಗಿಲ್ಲ. ಅದು ಆ ನಂತರದ ವಿಷಯ, ಮೊದಲು ಈ ಶಿಕ್ಷಕನಿಗೆ ಪ್ರವಾದಿ ಮುಹಮ್ಮದ್(ಸ)ರವರ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡಿ ಆ ಯುವಕನ್ನು ಅಥವಾ ಅವನಂತಹ ಶಸ್ತ್ರಾಸ್ತಗಳ ಕೈಗೆ ಬುದ್ಧಿ ಕೊಡುವ ಅವಿವೇಕಿಗಳನ್ನು ಉದ್ರೇಕಿಸುವ ಅಗತ್ಯವೇನಿತ್ತು..?

Freedom Of speach ಹೆಸರಲ್ಲಿ ನಾವು ಯಾರನ್ನೂ ಬೇಕಾದರೂ ಅವಮಾನಿಸಬಹುದು ಎಂದು ಅರ್ಥವೇ? ಇಂತಹ ಕಿಡಿಗೇಡಿತನವನ್ನೆಲ್ಲ Freedom Of speach ಎಂದು ಹೇಳುವುದೇ ತಪ್ಪು. ಇದು ಒಂದು ರೀತಿಯಲ್ಲಿ ಭಯೋತ್ಪಾದನೆ, ಜಗತ್ತಿನ ಶಾಂತಿಗೆ ಕೊಳ್ಳಿ ಇಡುವ ಕಿಡಿಗೇಡಿತನವಲ್ಲದೆ ಬೇರೇನೂ ಅಲ್ಲ.

ನೀವೇ ಒಮ್ಮೆ ಚಿಂತಿಸಿ ನೋಡಿ, ನೀವು ಮರಣದ ಮನೆಗೆ ಭೇಟಿ ನೀಡಿ ಆ ಮೃತ ವ್ಯಕ್ತಿಯ ದೇಹದ ಮುಂದೆ ನಿಂತು ಆತನ ಬಂಧು ಬಳಗ ಅಥವಾ ಮಕ್ಕಳ ಎದುರಲ್ಲೇ ಆತನನ್ನು ದೂಷಿಸಿದರೆ ಅಥವಾ ಆತನ ಬಗ್ಗೆ ವ್ಯಂಗ್ಯ ಮಾಡಿದರೆ ಅದನ್ನು Freedom Of speach ಎಂದು ಸಮರ್ಥಿಸಬಹುದೇ..? ನಿಮ್ಮ ಉತ್ತರ ಹೌದು ಎಂದಾದರೆ ನಿಮ್ಮ ಯೋಚನಾ ಶಕ್ತಿಯಲ್ಲಿ ಏನೋ ತೊಂದರೆ ಇದೆ ಎಂದು ಅರ್ಥ, ಇದು ಅತ್ಯಂತ ಕ್ರೂರ ಕೃತ್ಯ.

ಪ್ರವಾದಿ ಮುಹಮ್ಮದ್(ಸ)ರವರನ್ನು ಜಗತ್ತಿನ 1.8 ಬಿಲಿಯನ್ ಮುಸ್ಲಿಮರು ಪ್ರೀತಿಸುತ್ತಾರೆ. ಅವರನ್ನು ಅನುಸರಿಸುತ್ತಾರೆ. ಅವರು ಯಾರೂ ಪ್ರವಾದಿಯನ್ನು ನೋಡಿಲ್ಲವಾದರೂ ಅವರನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ಈ Freedom Of speach ಹೆಸರಲ್ಲಿ 1.8 ಬಿಲಿಯನ್ ಮುಸ್ಲಿಮರ ಭಾವನೆಗೆ ಧಕ್ಕೆ ಉಂಟು ಮಾಡಬಹುದೇ..?

ಮೊದಲನೇಯದಾಗಿ ಪ್ರವಾದಿ ಮುಹಮ್ಮದ್(ಸ)ರವರ ಯಾವುದೇ ಒಂದು ಫೋಟೋ ಕೂಡ ಈ ಜಗತ್ತಿನಲ್ಲಿ ಲಭ್ಯವಿಲ್ಲ. ಅಂತಹ ವ್ಯಕ್ತಿತ್ವದ ವ್ಯಂಗ್ಯ ಚಿತ್ರವನ್ನು ಬಿಡಿಸುವ ಅಗತ್ಯವಾದರೂ ಏನು..? ಇವರ ಉದ್ದೇಶ ಬಹಳ ಸ್ಪಷ್ಟವಿದೆ. ಜಗತ್ತಿನಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಗುಮ್ಮನನ್ನು ಬೆಳೆಸಿ ಜನರ ಮನ ಮಸ್ತಿಷ್ಕಕ್ಕೆ ತುಂಬಿರುವ ಅದೇ ಬಂಡವಾಳ ಶಾಹಿ ಚೇಲಾಗಳ ಕೃತ್ಯ ಇದು. ಫ್ರಾನ್ಸ್ ಇಂತಹ ಒಂದು ಕಿಡಿಗೇಡಿ ತನವನ್ನು ಈ ಹಿಂದಿನಿಂದರೂ ನಡೆಸುತ್ತಾ ಬಂದಿದೆ. ಕೊನೆಗೆ ಉದ್ರಿಕ್ತರು ಅವರ ವಿರುದ್ಧ ದಾಳಿ ಮಾಡಿದರೆ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಾರೆ. ಚಾರ್ಲಿ ಹೆಬ್ಡೊ ಪ್ರಕರಣದಲ್ಲೂ ಅದೇ ಆಗಿದ್ದು, ಮೊನ್ನೆಯ ಘಟನೆಯಲ್ಲೂ ಅದೇ ಆಗಿದ್ದು, ನಾವೆಲ್ಲ ಪ್ರವಾದಿ ಪ್ರೇಮಿಗಳೇ ಹಾಗಂತ ದುಡುಕಿನ ಕೃತ್ಯ ಶತ್ರುಗಳನ್ನು ಇನ್ನಷ್ಟು ಬೆಳೆಸುವಂತಾಗಬಾರದು. ಇಂತಹ ಕಿಡಿಗೇಡಿಗಳ ವಿರುದ್ಧ ಯುಕ್ತಿಯಿಂದ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅರಬ್ ದೇಶಗಳು ಕೈ ಗೊಂಡ ಬಾಯ್ಕಾಟ್ ಫ್ರಾನ್ಸ್ ಒಂದು ಉತ್ತಮ ಅಭಿಯಾನ. ಹೊರತು ಕಾನೂನು ಕೈ ಗೆತ್ತಿ ಕೊಳ್ಳುವ ಯಾರಿಗೂ ಯಾವುದೇ ನೈಜ ಪ್ರವಾದಿ ಪ್ರೇಮಿಗಳ ಬೆಂಬಲ ಖಂಡಿತಾ ಇಲ್ಲ.

-ನೌಫಲ್ ಕರೀಮ್

Leave a Reply