ಸಂದೇಶ ಮ್ಯಾಗಝಿನ್: ಸಾಧನೆ ಮಾಡಲು ತರಗತಿ ವಿದ್ಯಾಭ್ಯಾಸ ಮುಖ್ಯವೇ ಅಲ್ಲ… ಅದಕ್ಕೆ ಅಚಲವಾದ ಛಲ ಹಾಗು ಆಸಕ್ತಿ ಇದ್ದರೇ ಸಾಕು ಅಂತ ತಿಳಿದವರು ಹೇಳುತ್ತಾರೆ. ಅದು ನಿಜವೂ ಕೂಡ. ಎಷ್ಟೋ ಮಂದಿ ಸಾಂಪ್ರದಾಯಿಕ ವಿಧ್ಯಾಭ್ಯಾಸವಿಲ್ಲದೆಯೂ ಸಾಧನೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅಂತಹ ವ್ಯಕ್ತಿಗಳ ಪೈಕಿ ಇವತ್ತು ನಾವು ನಿಮಗೆ ಪರಿಚಯಿಸಲು ಹೊರಟಿರುವ ಈ ವ್ಯಕ್ತಿ ಅತ್ಯಂತ ವಿಶಿಷ್ಟರಾಗಿ ನಮ್ಮ ಮುಂದೆ ನಿಲ್ಲುತ್ತಾರೆ.
ಹೌದು ಆ ವ್ಯಕ್ತಿ ಬೇರೆ ಯಾರು ಅಲ್ಲ… ನಿನ್ನೆ ದೇಶದ ಮೂರನೇ ಅತ್ಯನ್ನತ ಗೌರವವಾದ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆ ಯಾಗಿರುವ ಲಕ್ಷದ್ವೀಪದ ಮಿನಿಕೋಯ್ ನಿವಾಸಿ ಅಲಿ ಮಾಣಿಕ್ ಫಾನ್. ಈ ವ್ಯಕ್ತಿಯ ಸಾಧನೆಗಳನ್ನು ಕೇಳುತ್ತಾ ಹೋದರೆ ಯಾರು ಕೂಡ ಮೂಗಿನ ಮೇಲೆ ಬೆರಳಿಡುವಂತಿದೆ. ಇವರಿಗೆ ”ದ ಮ್ಯಾನ್ ಇನ್ ಮಿಲಿಯನ್” ಅಂತಲೂ ಕರೆಯುತ್ತಾರೆ.
ಲಕ್ಷದ್ವೀಪದ ಮಿನಿಕೋಯ್ ಎಂಬ ದ್ವೀಪದಲ್ಲಿ 1938 ರಲ್ಲಿ ಜನಿಸಿದ ಅಲಿ ಮಾಣಿಕ್ ಫಾನ್ ಶಾಲೆಗೇ ಹೋಗಿ ಸಾಂಪ್ರದಾಯಿಕ ಶಿಕ್ಷಣ ಪಡೆದಿಲ್ಲ. ಆದರೂ ಅವರು ಇಂದು ವಿಶ್ವದ ಸುಮಾರು 14 ಭಾಷೆಗಳಲ್ಲಿ ವ್ಯವಹರಿಸಬಲ್ಲರು. ಇಷ್ಟು ಮಾತ್ರವಲ್ಲದೆ ಸಾಗರ ಜೀವಶಾಸ್ತ್ರ, ಪರಿಸರ ವಿಜ್ಞಾನ, ವಿಶ್ವವಿಜ್ಞಾನ, ಹಡಗು ನಿರ್ಮಾಣ, ಧಾರ್ಮಿಕ ಕ್ಷೇತ್ರದಲ್ಲೂ ಈ ವ್ಯಕ್ತಿ ಸಾಧನೆ ಮಾಡಿದ್ದಾರೆ.
Table of Contents
ಸಣ್ಣ ಪ್ರಾಯದಲ್ಲೇ ಸಂಶೋಧನಾ ಆಸಕ್ತಿ ಬೆಳೆಸಿದ್ದ ಅಲಿ ಮಾಣಿಕ್ ಫಾನ್:
ನೀವು ಇಷ್ಟೆಲ್ಲಾ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ಕೇಳುವಾಗ ಅಲಿ ನಗುತ್ತಾ ಸಿಂಪಲ್ಲಾಗಿ ನೀಡುವ ಉತ್ತರ ಇಷ್ಟೇ… ನನಗೆ ಸಣ್ಣ ಪ್ರಾಯದಲ್ಲೇ ಕಲಿಯಬೇಕು ಸಂಶೋಧನೆ ಮಾಡಬೇಕು ಎಂಬ ಆಸಕ್ತಿ ಇತ್ತು. ಆ ಕಾರಣದಿಂದಾಗಿ ನಾನು ನನಗೆ ಆಸಕ್ತಿ ಇರುವ ಎಲ್ಲಾ ವಿಷಯಗಳನ್ನು ಕಲಿಯುತ್ತಾ ಹೋದೆ ಎನ್ನುತ್ತಾರೆ.
ಬದುಕಿನ ದಿಕ್ಕನ್ನೇ ಬದಲಿಸಿದ ಘಟನೆ:
ಒಂದು ದಿನ ಹದಿಹರೆಯದ ಯುವಕ ಅಲಿ ಮಾಣಿಕ್ ಫಾನ್ ಸಮುದ್ರದಲ್ಲಿ ಈಜುತ್ತಾ ಇರುವಾಗ ಒಂದು ದಿನ ಹದಿಹರೆಯದ ಯುವಕ ಅಲಿ ಮಾಣಿಕ್ ಫಾನ್ ಸಮುದ್ರದಲ್ಲಿ ಈಜುತ್ತಾ ಇರುವಾಗ ಸೆಂಟ್ರಲ್ಮರೀನ್ಫಿಶರೀಶ್ನ ನಿರ್ದೇಷಕರು ಒಂದು ಸಣ್ಣ ಹಡಗಿನಲ್ಲಿ ಆ ಮಾರ್ಗವಾಗಿ ಬರುತ್ತಾರೆ. ಆಗ ಅಲಿ ಮಾಣಿಕ್ಫಾನ್ಅವರು ಅಲ್ಲಿಗೆ ಈಜುತ್ತಾ ಹೋಗುತ್ತಾರೆ. ಸಮುದ್ರದ ಬಗ್ಗೆ ಅಲಿ ಅವರಿಗಿದ್ದ ಅಪಾರ ಜ್ಞಾನವನ್ನು ಗಮನಿಸಿ ಅಲಿಯವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.
ಒಂದು ದಿನ ಹದಿಹರೆಯದ ಯುವಕ ಅಲಿ ಮಾಣಿಕ್ ಫಾನ್ ಸಮುದ್ರದಲ್ಲಿ ಈಜುತ್ತಾ ಇರುವಾಗ ಸೆಂಟ್ರಲ್ಮರೀನ್ಫಿಶರೀಶ್ನ ನಿರ್ದೇಷಕರು ಒಂದು ಸಣ್ಣ ಹಡಗಿನಲ್ಲಿ ಆ ಮಾರ್ಗವಾಗಿ ಬರುತ್ತಾರೆ. ಆಗ ಅಲಿ ಮಾಣಿಕ್ಫಾನ್ಅವರು ಅಲ್ಲಿಗೆ ಈಜುತ್ತಾ ಹೋಗುತ್ತಾರೆ. ಸಮುದ್ರದ ಬಗ್ಗೆ ಅಲಿ ಅವರಿಗಿದ್ದ ಅಪಾರ ಜ್ಞಾನವನ್ನು ಗಮನಿಸಿ ಅಲಿಯವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.
ಮೀನೊಂದಕ್ಕೆ ಅಲಿಯವರ ಹೆಸರಿದೆ:
ಬಹುಷಃ ಈ ಜಗತ್ತಿನಲ್ಲಿ ತನ್ನ ಹೆಸರಿನಲ್ಲಿ ಮೀನೊಂದನ್ನು ಹೊಂದಿರುವ ವ್ಯಕ್ತಿ ಅಲಿ ಮಾಣಿಕ್ಫಾನ್ಅವರು ಒಬ್ಬರೇ. ಸೆಂಟ್ರಲ್ಮರೀನ್ಫಿಶರೀಶ್ನಲ್ಲಿ ಕೆಲಸ ಮಾಡುತ್ತಿದ್ದ ಅಲಿಯವರಿಗೆ ಅಲ್ಲಿ ಮೀನುಗಳನ್ನು ಸಂಗ್ರಹಿಸುವ ಕೆಲಸ ನೀಡಿದ್ದರು. ಹೀಗೆ ಕೆಲಸ ಮಾಡುತ್ತಿರುವಾಗ ಒಂದು ದಿನ ಒಂದು ವಿಶೇಷ ರೀತಿಯ ಮೀನೊಂದು ಅಲಿಯವರ ಗಮನ ಸೆಲೆಯುತ್ತದೆ. ಇದರ ಜಾಡು ಹಿಡಿದ ಅಲಿಯವರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಆ ಮೀನಿನ ಬಗ್ಗೆ ಈ ಜಗತ್ತಿನಲ್ಲಿ ನಡೆದ ಪ್ರಪ್ರಥಮ ಸಂಶೋಧನೆ ಅದಾಗಿತ್ತು. ಇದರ ಗೌರವಾರ್ಥವಾಗಿ ಸೆಂಟ್ರಲ್ ಮರೀನ್ ಫಿಶರೀಶ್ ಆ ಮೀನಿಗೆ ʻಅಬೂ ದಫ್ ದಫ್ ಮಲಿಕ್ಫಾನಿʼ ಎಂದು ಹೆಸರಟ್ಟಿದೆ.
ತುಳಿಯದೆ ಚಲಿಸೋ ಸೈಕಲ್ ತಯಾರಿಸಿ ದಿಲ್ಲಿ ಪ್ರಯಾಣ:
ಅಲಿ ಮಾಣಿಕ್ ಫಾನ್ ಅವರು ತಮ್ಮ ಕೈ ಚಳಕ ತೋರಿಸದ ಕ್ಷೇತ್ರವೇ ಇಲ್ಲ ಅಂತ ನಿಮಗೆ ಅನಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಅಲಿ ಮಾಣಿಕ್ ಫಾನ್ ಅವರು ಹೆಚ್ಚು ಕಡಿಮೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ.
1982ರಲ್ಲಿ ತನ್ನದೇ ಆದಂತಹ ಒಂದು ವಿಶಿಷ್ಟ ಸೈಕಲ್ ನಿರ್ಮಿಸಿದ ಅಲಿ ಮಣಿಕ್ ಫಾನ್ ಅವರು, ಅದರ ಪ್ರಯೋಗಾರ್ಥವಾಗಿ ಆ ಸೈಕಲಿನಲ್ಲಿ ಮಗನೊಂದಿಗೆ ದೆಹಲಿ ಯಾತ್ರೆ ಮಾಡಿದ್ದರು. ಇದು 45 ದಿನಗಳ ಒಂದು ಸ್ಮರಣೀಯ ಯಾತ್ರೆಯಾಗಿತ್ತು. ಈ ಸೈಕಲಿನ ವಿಶೇಷತೆಯೇನೆಂದರೆ, ಇದು ತನ್ನ ಮುಂದಿನ ಚಕ್ರದ ಸಹಾಯದಿಂದ ಚಲಿಸುತ್ತದೆ. ಇದನ್ನು ತುಳಿಯ ಬೇಕಾದ ಅವಶ್ಯಕತೆ ಇರಲಿಲ್ಲ. ಸೈಕಲಿನ ಮುಂದಿನ ಚಕ್ರಕ್ಕೆ ಡೈನಮೋ ಅಳವಡಿಸಲಾಗಿತ್ತು. ಡೈನಮೋ ತಿರುಗುವಾಗ ಅದರ ಸಹಾಯದೊಂದಿಗೆ ಸೈಕಲಿನ ಮುಂದಿನ ಚಕ್ರ ತಿರುಗುತ್ತಿತ್ತು. ಇದರ ಪೇಟೆಂಟ್ ಈಗಲೂ ಅಲಿಯವರ ಹೆಸರಲ್ಲಿದೆ.
ಹಡಗು ನಿರ್ಮಾತೃ:
ಅಲಿ ಮಾಣಿಕ್ ಫಾನ್ ಅವರು ಓಮಾನ್ ದೇಶದ ಸೋಹರ್ ನಲ್ಲಿ ಒಂದು ವಿಶಿಷ್ಟ ಹಡಗನ್ನು ನಿರ್ಮಿಸಿದ್ದಾರೆ. ಈ ಹಡಗು ನಿರ್ಮಾಣಕ್ಕೆ ಯಾವುದೇ ಕಬ್ಬಿಣದ ಮೊಳೆಗಳನ್ನು ಬಳಸುವಂತಿರಲಿಲ್ಲ. ಕೇವಲ ಹಗ್ಗ ಮತ್ತು ಹಲಗೆಗಳಿಂದ ಇದರ ನಿರ್ಮಾಣ ಮಾಡಬೇಕಾಗಿತ್ತು. ಅಲಿ ಮಾಣಿಕ್ ಫಾನ್ ಅವರು ತಮ್ಮ ಇಪ್ಪತ್ತು ಜನರ ತಂಡದೊಂದಿಗೆ ಅಲ್ಲಿಗೆ ಹೋಗಿ ಆ ಹಡಗನ್ನು ನಿರ್ಮಿಸಿ ಕೊಟ್ಟಿತ್ತು. ಈ ಹಡಗು ಈಗಲೂ ಸೋಹರ್ ನ ಮ್ಯೂಸಿಯಂ ಒಂದರಲ್ಲಿದೆ.
ಕೃಷಿ ತಜ್ಞ ಮಾಣಿಕ್ ಫಾನ್:
ಅಲಿ ಮಾಣಿಕ್ ಫಾನ್ ಅವರು ತಮಿಳು ನಾಡಿನ ರಾಮೇಶ್ವರಂ ನಲ್ಲಿದ್ದಾಗ ಅಲ್ಲಿ ತೆಂಗಿನ ಮರಗಳು ಸೊರಗಿರುವುದನ್ನು ಕಂಡರು. ಇದಕ್ಕೆ ಕಾರಣವೇನಿರಬಹುದು ಎಂದು ಸಂಶೋಧನೆಗಿಳಿದ ಅಲಿಯವರಿಗೆ ಕೆಲವೊಂದು ಕಾರಣಗಳು ದೊರೆತವು. ಮುಖ್ಯವಾಗಿ ಅಲ್ಲಿನ ಜನರು ಆ ತೆಂಗಿನ ಮರಗಳ ಬುಡದಲ್ಲೇ ತಮ್ಮ ಜಾನುವಾರುಗಳನ್ನು ಮೇಯಲು ಬಿಡುತ್ತಿದ್ದರು. ಆ ತೆಂಗಿನ ಮರದಿಂದ ಉದುರುವ ಗರಿ ಕಾಯಿ ಮುಂತಾದವುಗಳನ್ನು ಸ್ವಲ್ಪವೂ ಬಿಡದೆ ಹೆಕ್ಕುತ್ತಿದ್ದರು. ಇದರಿಂದಾಗಿ ಆ ತೆಂಗಿನ ಮರಗಳು ಅಪೌಷ್ಟಿಕತೆಯಿಂದ ಬಳಲುತ್ತಿತ್ತು. ಅದನ್ನೆಲ್ಲ ತಡೆದ ಅಲಿಯವರು, ಮೂರೇ ವರ್ಷಗಳಲ್ಲಿ ಅತ್ಯುತ್ತಮ ಫಸಲು ಪಡೆಯುವಲ್ಲಿ ಯಶಸ್ವಿಯಾದರು.
ಚಾಂದ್ರಮಾನ ತಿಂಗಳ ಕ್ಯಾಲೆಂಡರ್ ನಲ್ಲಿ ಸುಧಾರಣೆಗೆ ಪ್ರಯತ್ನ:
ಇದು ಪ್ರಸ್ತುತ ಅಲಿ ಮಾಣಿಕ್ ಫಾನ್ ಅವರು ಕೈಗೆತ್ತಿಕೊಂಡಿರುವ ಹೊಸ ಸಂಶೋಧನೆ. ಇದರ ಹಿಂದೆ ಒಂದು ದೊಡ್ಡ ಕಥೆಯನ್ನೇ ಅಲಿ ಹೇಳುತ್ತಾರೆ. 1965ರಲ್ಲಿ ಕೇರಳದಲ್ಲಿ ಈದ್ ಮುಗಿಸಿ ಲಕ್ಷ ದ್ವೀಪಕ್ಕೆ ಹೊರಟಿದ್ದ ಹಡಗಿನಲ್ಲಿ ಅಲಿ ಮಾಣಿಕ್ ಫಾನ್ ಯಾತ್ರಿಕರಾಗಿದ್ದರು. ಆ ಹಡಗು ಮರುದಿನ ಲಕ್ಷ ದ್ವೀಪ ಸಮೂಹದ ದ್ವೀಪವೊಂದನ್ನು ತಲುಪಿತ್ತು. ಆದರೆ ಆ ದಿನ ಅಲ್ಲಿ ಹಡಗು ಕಟ್ಟೆಯಲ್ಲಿ ಯಾರೂ ಇರಲಿಲ್ಲ. ಏಕೆಂದರೆ ಅಂದು ಅಲ್ಲಿ ಈದ್ ಆಗಿತ್ತು. ಮರುದಿನ ಅದೇ ಹಡಗು ಮಿನಿಕೋಯ್ ತಲುಪಿದಾಗ ಅಲ್ಲಿ ಈದ್ ಆಗಿತ್ತು. ಒಂದೇ ದಿವಸ ಬೇರೆ ಬೇರೆ ದಿನ ಬರುವುದು ಹೇಗೆ ಎಂದು ಅಂದು ಚಿಂತಸಿದ ಅಲಿ ಮಾಣಿಕ್ ಫಾನ್ ಇದಕ್ಕೆ ಒಂದು ಪರಿಹಾರ ಹುಡುಕಲು ತೀರ್ಮಾನಸಿದರು. ಆದರೆ ಆ ಕಾರ್ಯದಲ್ಲಿ ಅವರು ಇಂದಿಗೂ ಯಶಸ್ವಿ ಹಂತಕ್ಕೆ ತಲುಪಿಲ್ಲ.
ತಮ್ಮ ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡಿದ ಬಗ್ಗೆ ಅಲಿಯವರಲ್ಲಿ ಕೇಳಿದಾಗ ಅವರು ನೀಡುವ ಉತ್ತರ ಅವರ ಒಳಗೊಬ್ಬ ಅತ್ಯುತ್ತಮ ಶಿಕ್ಷಣ ತಜ್ಞನಿರುವುದಕ್ಕೆ ಪುರಾವೆ ಒದಗಿಸುತ್ತದೆ. ಅವರು ಹೇಳುತ್ತಾರೆ; ʻʻನಮಗೆ ಬೇಕಾಗಿರುವುದು ಅರಿವು ಅಲ್ವ? ಅದು ಎಲ್ಲಿ ದೊರೆತರೆ ಏನು? ಇಂದು ನಮ್ಮ ಶಾಲೆಗಳಲ್ಲಿ ವಿಭಿನ್ನ ಪ್ರತಿಬಹೆಗಳಿರುವ ಮಕ್ಕಳಿರುತ್ತಾರೆ. ಎಲ್ಲರನ್ನೂ ಒಂದೇ ರೀತಿ ನೋಡಲಾಗುತ್ತದೆ. ಇದರಿಂದಾಗಿ ಅವರ ಪ್ರತಿಭೆಗಳು ಬೆಳೆಯಲ್ಲ. ʼʼ
ಅಲಿವರ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು ಇಂದು ಟೀಚರ್ ಆಗಿದ್ದಾರೆ. ಮಗ ಹಡಗಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾಲೆಗೆ ಹೋಗದ ಕಾರಣ ಇವರೆಲ್ಲರೂ ಉದ್ಯೋಗ ಪಡೆಯಲು ಅದಕ್ಕೆ ಬೇಕಾದ ಅರ್ಹತಾ ಪರೀಕ್ಷೆಗಳನ್ನು ಬರೆದು ಉದ್ಯೋಗ ಗಿಟ್ಟಿಸಿ ಕೊಂಡಿದ್ದಾರೆ.
ಹೀಗೆ ಇವರ ಸಾಧನೆಗಳು ಹಲವು. ಈ ಸಾಧನೆಗಳನ್ನು ಗುರುತಿಸಿ ಭಾರತ ಸರಕಾರ ಇವರಿಗೆ ಈ ಸಾಲಿನ ಪದ್ಮ ಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಇಂತಹ ಸಾಧಕರೊಬ್ಬರು ನಮ್ಮ ನಡುವೆ ಇದ್ದಾರೆ ಎಂಬುದೇ ನಮಗೆ ಹೆಮ್ಮೆ ಅಲ್ವ.